ನಗರದ ಕುಂಟಲ್ಪಾಡಿಯಲ್ಲಿ ಮಧ್ಯರಾತ್ರಿ ವ್ಯಕ್ತಿ ಒಬ್ಬರನ್ನ ಬರ್ಬರವಾಗಿ ಹತ್ಯೆ ಮಾಡಿದ್ದು ಈ ಕೊಲೆಯ ಆರೋಪಿಯಾದ ಪರೀಕ್ಷಿತ್ ಸಂಜೀವ್ ಗೌಡ ಎನ್ನು ಆತನನ್ನ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ನಗರದಲ್ಲಿ ಎಸ್ಪಿ ಅವರು ಮಾಹಿತಿಯನ್ನು ನೀಡಿದ್ದು ಕೊಲೆ ಆರೋಪಿ ಹಾಗೂ ಕೊಲೆಯಾದ ವ್ಯಕ್ತಿ ಇಬ್ಬರಿಗೂ ಪರಿಚಯ ಇತ್ತು, ಇಬ್ಬರು ವಿವಾಹಿತರಾಗಿದ್ದು ಬೇರೆ ಬೇರೆ ಕಾರಣಗಳಿಂದ ಪತ್ನಿಯೊಂದಿಗೆ ಮುನಿಸಿಕೊಂಡು ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ಈ ಮಧ್ಯೆ ಆರೋಪಿ ಪರೀಕ್ಷೆ ಗೆಳತಿಯೊಂದಿಗೆ ನವೀನ್ ಪರಿಚಯ ಮಾಡಿಕೊಂಡಿದ್ದು ಈ ಕೊಲೆಗೆ ಕಾರಣವಾಗಿದೆ ಎಂದು ತಿಳಿದುಬಂದಿದೆ.