ಅತಿವೃಷ್ಟಿ ಹಿನ್ನೆಲೆಯಲ್ಲಿ ಹಾನಿ ಆಗಿರುವ ಹಿನ್ನೆಲೆಯಲ್ಲಿ ಕೇವಲ ಬೀದರ್ ನಗರಕ್ಕೆ ₹ 200 ಕೋಟಿ ಪರಿಹಾರ ನೀಡಲು ಈಗಾಗಲೇ ಸಿಎಂ ಗೆ ಮನವಿ ಮಾಡಲಾಗಿದೆ ಎಂದು ಹೋರಾಡಳಿತ ಮತ್ತು ಹಜ್ ಖಾತೆ ಸಚಿವ ರಹೀಮ್ ಖಾನ್ ಅವರು ತಿಳಿಸಿದರು. ಅತಿವೃಷ್ಟಿ ಹಿನ್ನೆಲೆಯಲ್ಲಿ ಬೀದರ್ ನಗರ ಸೇರಿದಂತೆ ತಾಲೂಕಿನ ಚಿಲ್ಲರ್ಗಿ ಸಾಂಗ್ ವಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಮನೆ ಹಾನಿ ಮತ್ತು ಬೆಳೆ ಹಾನಿ ಪರಿಶೀಲನೆ ಬಳಿಕ ಯರನ್ನಳ್ಳಿಯಲ್ಲಿ ತಿಳಿಸಿದರು.