ಸಿಇಓ ಅವರಿಂದ ಅರಳೇರಿ ಗ್ರಾಮ ಪಂಚಾಯತಿ, ಶಾಲೆ, ಅಂಗನವಾಡಿಗೆ ದಿಢೀರ್ ಭೇಟಿ ಕೋಲಾರ : ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಪ್ರವೀಣ್ ಪಿ ಬಾಗೇವಾಡಿ ಅವರು ಇಂದು ಮಾಲೂರು ತಾಲೂಕಿನ ಅರಳೇರಿ ಗ್ರಾಮ ಪಂಚಾಯತಿಗೆ ಭೇಟಿ ನೀಡಿ, ತೆರಿಗೆ ಸಂಗ್ರಹ, ಕಸ ವಿಲೇವಾರಿ, ಗ್ರಂಥಾಲಯ,ನರೇಗಾ ಕಡತಗಳು,ವಿವಿಧ ಯೋಜನೆಗಳ ಬಗ್ಗೆ ದಾಖಲೆಗಳನ್ನು ಪರಿಶೀಲನೆ ಮಾಡಿದರು. ಗ್ರಾಮ ಪಂಚಾಯತಿ ಆವರಣದಲ್ಲಿ ಸಸಿ ನೆಟ್ಟು ,ಸರ್ಕಾರಿ ಶಾಲೆ, ಮತ್ತು ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ, ಮಕ್ಕಳಿಗೆ ನೀಡುವ ಆಹಾರ ಪರಿಶೀಲಿಸಿ,ಅಂಗನವಾಡಿ ಆವರಣವನ್ನು ಮತ್ತು ಶಾಲೆಯಲ್ಲಿ ಸ್ವಚ್ಛತೆ ಕಾಪಾಡಲು ಸೂಚಿಸಿದರು.