ಚಿತ್ರದುರ್ಗ ಜಿಲ್ಲಾಡಳಿತ ಕಚೇರಿ ನೂತನ ಕಟ್ಟಡವನ್ನ ಮೆಡಿಕಲ್ ಕಾಲೇಜಿಗೆ ವರ್ಗಾವಣೆ ಮಾಡುತ್ತಿರುವುದನ್ನ ಖಂಡಿಸಿ ಶನಿವಾರ ಮಧ್ಯಾಹ್ನ 1 ಗಂಟೆಗೆ ಚಿತ್ರದುರ್ಗದಲ್ಲಿ ಆಮ್ ಆದ್ಮಿ ಪಕ್ಷದಿಂದ ಸುದ್ದಿಗೋಷ್ಟಿ ನಡೆಸಲಾಯಿತು. ಜಿಲ್ಲಾ ಅಧ್ಯಕ್ಷ ಜಗದೀಶ್ ಮಾತನಾಡಿ ಹತ್ತು ವರ್ಷಗಳ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಂದಿನ ಜಿಲ್ಲಾ ಮಂತ್ರಿ ಎಚ್.ಆಂಜನೇಯ ಜಿಲ್ಲಾ ಆಡಳಿತದ ಅನುಕೂಲಕ್ಕಾಗಿ 3 ಕಿಲೋಮೀಟರ್ ದೂರದ ಕುಂಚಿಟಿಗ ನಾಳ್ ಬಳಿ ಜಾಗ ಗುರ್ತಿಸಿ, ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ಇದೀಗ ಕಟ್ಟಡ ಕೂಡಾ ಅಂತಿಮ ಹಂತಕ್ಕೆ ಬರುತ್ತಿದ್ದಂತೆ ಜಿಲ್ಲೆಯ ಸಚಿವರು ಹಾಗೂ ಶಾಸಕರು ವೈದ್ಯಕೀಯ ಕಾಲೇಜಿಗೆ ವರ್ಗಾವಣೆ ಮಾಡಲು ಮುಂದಾಗಿದ್ದಾರೆ ಎಂದರು