ಯಾದಗಿರಿ ನಗರದಲ್ಲಿ ಸಹಮತ ವೇದಿಕೆ ಯಾದಗಿರಿ, ಬಸವ ಸಂಸ್ಕೃತಿ ಅಭಿಯಾನ ಸಮಿತಿ ಯಾದಗಿರಿ ಹಾಗೂ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಇವರುಗಳ ಸಂಯುಕ್ತ ಆಶ್ರಯದಲ್ಲಿ ಗುರುವಾರ ರಾತ್ರಿವರೆಗೆ ಪಾಟೀಲ್ ಕಲ್ಯಾಣ ಮಂಟಪದಲ್ಲಿ ಬಸವ ಸಂಸ್ಕೃತಿ ಅಭಿಯಾನ ಹಾಗೂ ಅನುಭವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಸುಭಾಷ್ ವೃತ್ತ ದಿಂದ ಪಾಟೀಲ ಕಲ್ಯಾಣ ಮಂಟಪದ ವರೆಗೆ ಅಭಿಯಾನದ ರಥದ ಮೆರವಣಿಗೆ, ನಂತರ ಅನುಭವ ಕಾರ್ಯಕ್ರಮ ನಡೆಯಿತು. ಸಾಣೆ ಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ,ಭಾಲ್ಕಿಯ ಡಾಕ್ಟರ್ ಬಸವಲಿಂಗ ಪಟ್ಟದೇವರು, ಹುಲಿಕಲ್ ನಟರಾಜ ಸೇರಿದಂತೆ ಅನೇಕ ಜನ ಮಠಾಧಿಪತಿಗಳು ಹಾಗೂ ಸಾವಿರಾರು ಜನ ಭಾಗವಹಿಸಿದ್ದರು.