ಸಾತ್ ಮೈಲ್ ಕ್ರಾಸ್ ನಲ್ಲಿ ಸೆ.3 ರ ಬುಧವಾರ ರಾತ್ರಿ 7 ಗಂಟೆಗೆ ಭರ್ಜರಿ ಮಳೆ ಸುರಿಯುತ್ತಿದೆ. ಕಳೆದ ಎರಡು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ವಾಹನ ಸವಾರರು, ಪ್ರಯಾಣಿಕರು ಪರದಾಡಿದರು. ಜಿಟಿ ಜಿಟಿ ಮಳೆ ಹಾಗೂ ಮೋಡ ಕವಿದ ವಾತಾವರಣದಿಂದ ಸಾರ್ವಜನಿಕರಿಗೆ ಶೀತಜ್ವರ, ಮಕ್ಕಳಲ್ಲಿ ವೈರಲ್ ಜ್ವರ ಕಾಣಿಸಿಕೊಂಡು ಬಾಧಿಸುತ್ತಿದೆ. ಇನ್ನು ಬಿಡದೆ ಸುರಿಯುತ್ತಿರುವ ಮಳೆಗೆ ನೀರಾವರಿ ಪ್ರದೇಶಗಳಲ್ಲಿ ಹಾಕಲಾದ ಹತ್ತಿ ಬೆಳೆ ಹಾಳಾಗುವ ಸಾಧ್ಯತೆ ಇದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.