ಕರ್ನಾಟಕ ಸರ್ಕಾರದಿಂದ ದಿವಂಗತ ನಟ ವಿಷ್ಣುವರ್ಧನ್ ಅವರಿಗೆ ರಾಜ್ಯದ ಅತ್ಯುನ್ನತ ಗೌರವವಾದ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆಯಾದ ಹಿನ್ನೆಲೆಯಲ್ಲಿ, ಕೊಳ್ಳೇಗಾಲ ಪಟ್ಟಣದಲ್ಲಿ ಅವರ ಅಭಿಮಾನಿಗಳು ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು ಈ ಸಂದರ್ಭದಲ್ಲಿ ವಿಷ್ಣು ಸಮಿತಿಯ ಸದಸ್ಯರು ಮಾತನಾಡಿ ವಿಷ್ಣುವರ್ಧನ್ ರವರಿಗೆ ಕರ್ನಾಟಕ ರತ್ನ ಘೋಷಣೆಯಾಗಿದ್ದು, ಎಲ್ಲ ಅಭಿಮಾನಿಗಳಿಗೆ ಹೆಮ್ಮೆಯ ವಿಷಯ. ಬಹುದಿನಗಳಿಂದ ನಮ್ಮ ಮನಸಲ್ಲಿದ್ದ ಅಪೇಕ್ಷೆ ಇಂದು ನಿಜವಾಗುತ್ತಿದೆ," ಎಂದರು ಹಾಗಯೇ ಈ ಹಿಂದೆ ವಿಷ್ಣುವರ್ಧನ್ ರವರ ಸ್ಮಾರಕ ನಿರ್ಮಾಣಕ್ಕಾಗಿ ಕೊಟ್ಟಿದ್ದ 10 ಗುಂಟೆ ಜಾಗವನ್ನು ಮತ್ತೆ ಮಂಜೂರು ಮಾಡಿದರೆ, ಅಭಿಮಾನಿಗಳ ಹೃದಯದಲ್ಲಿ ಇನ್ನೂ ಹೆಚ್ಚು ಸಂತೋಷ ಉಂಟಾಗಲಿದೆ. ಸರ್ಕಾರ ಈ ವಿಷಯವನ್ನೂ ಪರಿಗಣಿಸಬೇಕು ಎಂದರು