ಕಂಪ್ಲಿ ನಗರದ ಮೇನ್ ಬಜಾರ್‌ನಲ್ಲಿರುವ ಬಂಗಾರ ಅಂಗಡಿ ಬಳಿ ವ್ಯಾನಿಟಿ ಬ್ಯಾಗ್ ಕಳ್ಳತನವಾದ ಘಟನೆ ಆಗಸ್ಟ್ 28, ಗುರುವಾರ ಮಧ್ಯಾಹ್ನ 1:50ಕ್ಕೆ ನಡೆದಿದೆ.ಮಹಿಳೆಯೊಬ್ಬರು ಬಂಗಾರ ಖರೀದಿಸಲು ಅಂಗಡಿಗೆ ಬಂದಿದ್ದು, ತಮ್ಮ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಹಣವನ್ನು ತೆಗೆದುಕೊಂಡು, ಖಾಲಿ ಬ್ಯಾಗ್ ಅನ್ನು ಬೈಕ್‌ನಲ್ಲಿ ಇಟ್ಟು ಹೋಗಿದ್ದರು. ಇದನ್ನು ತಿಳಿಯದ ವ್ಯಕ್ತಿಯೊಬ್ಬ, ಅದರೊಳಗೆ ಬಂಗಾರ ಹಾಗೂ ಹಣ ಇದೆ ಎಂದುಕೊಂಡು, ಬೈಕ್‌ನಲ್ಲಿದ್ದ ವ್ಯಾನಿಟಿ ಬ್ಯಾಗ್ ಅನ್ನು ಕದ್ದೊಯ್ದಿದ್ದಾನೆ.ಈ ಘಟನೆ ಅಂಗಡಿಯ ಸಿಸಿಟಿವಿ ಕ್ಯಾಮರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ.