ಹುಣಸಿಹಾಳಹುಡಾ ಗ್ರಾಮದಲ್ಲಿ ಸೆಪ್ಟೆಂಬರ್ 4ರ ಗುರುವಾರ ರಾತ್ರಿ 9 ಗಂಟೆಗೆ 9ನೇ ದಿನ ಗಣಪತಿ ವಿಸರ್ಜನೆ ಅಂಗವಾಗಿ ಗಣಪತಿ ಮೂರ್ತಿ ಮೆರವಣಿಗೆ ಅದ್ದೂರಿಯಾಗಿ ಜರುಗಿತು. ಗ್ರಾಮದ ಗಜಾನನ ಯುವಕ ಮಂಡಳಿ ಈ ಬಾರಿ ಅಚ್ಚುಕಟ್ಟಾಗಿ ಗಣೇಶ ಪ್ರತಿಷ್ಠಾಪನೆ ಕಾರ್ಯಕ್ರಮ ಆಯೋಜಿಸಿ, ಕೊನೆಯ ದಿನವಾದ ಇಂದು ಇಡೀ ಊರಿಗೆಲ್ಲಾ ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಏಳನೇ ದಿವಸ ಮನರಂಜನೆಗಾಗಿ ಆರ್ಕೆಸ್ಟ್ರಾ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಇದೀಗ ಗಣಪತಿ ವಿಸರ್ಜನೆಯ ಅಂಗವಾಗಿ ಯುವಕರು ಪಟಾಕಿ ಸಿಡಿಸಿ ಪರಸ್ಪರ ಬಣ್ಣ ಹಾಕಿ ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿದರು.