ಸ್ವಲ್ಪ ತಾಳ್ರಿ ನೀವು ಮಾಧ್ಯಮದವರು ಸ್ವಲ್ಪ ಬದಲಾವಣೆ ಆಗದಿದ್ದರೆ ಯಾರು ಮಾತಾಡೋದು ಕಷ್ಟ ಆಗ್ತದೆ ಎಂದು ಕೇಂದ್ರದ ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಪತ್ರಕರ್ತರೊಂದಿಗೆ ಸಿಡಿಮಿಡಿಗೊಂಡರು ಅನುಭವಿ ರಾಜಕಾರಣಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಪತ್ರಕರ್ತರಿಗೆ ತಿಳುವಳಿಕೆ ಹೇಳಿದ್ದರಲ್ಲಿ ತಪ್ಪೇನಿದೆ ಎಂದು ಸೋಮಣ್ಣ ಸಮರ್ಥಿಸಿಕೊಂಡರು. ಅವರು ತುಮಕೂರು ನಗರ ರೈಲು ನಿಲ್ದಾಣ ಆವರಣದಲ್ಲಿ ಭಾನುವಾರ ಮಧ್ಯಾಹ್ನ 12 ರ ಸಮಯದಲ್ಲಿ ಜಿಲ್ಲಾ ರೈಲ್ವೇ ಪ್ರಯಾಣಿಕರ ವೇದಿಕೆಯ 11ನೇ ವರ್ಷಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಮತ್ತು ನೇತ್ರ ತಪಾಸಣೆ, ರಕ್ತದಾನ ಶಿಬಿರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.