ಕಲಬುರಗಿ : ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಪಾಲ್ತ್ಯಾ ತಾಂಡಾದಲ್ಲಿ ಹುಚ್ಚು ನಾಯಿಗಳ ದಾಳಿಯಿಂದ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಹಸು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪಿದೆ.. ಕೆಲ ದಿನಗಳ ಹಿಂದೆ ಹಸುವಿಗೆ ತಾಂಡಾದಲ್ಲಿ ಹುಚ್ಚುನಾಯಿಗಳು ದಾಳಿ ಮಾಡಿ ಕಚ್ಚಿದ್ದವು.. ಬಳಿಕ ಹಸುವಿಗೆ ಹುಚ್ಚು ಹಿಡಿದಿತ್ತು.. ಹುಚ್ಚು ಹಿಡಿದ ಬಳಿಕ ಹಸು ಗೋಡೆಗೆ ಗುದ್ದಿಕೊಂಡು ಅದರ ಕೊಂಬು ಮುರಿದು ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿತ್ತು. ಸದ್ಯ ಚಿಕಿತ್ಸೆ ಫಲಕಾರಿಯಾಗದೇ ಹಸು ಸಾವನ್ನಪ್ಪಿದ್ದು, ಪಶು ವೈದ್ಯರು ಮತ್ತು ತಾಂಡಾ ಜನರ ಸಮ್ಮುಖದಲ್ಲಿ ಸೆ1 ರಂದು ಬೆಳಗ್ಗೆ 8 ಗಂಟೆಗೆ ಹಸುವಿನ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ..