ಧರ್ಮಸ್ಥಳ ಕ್ಷೇತ್ರಕ್ಕೆ ಅಪಪ್ರಚಾರ ವಿಚಾರ ಕುರಿತಂತೆ ಆರೋಪಿ ಮಾಸ್ಕ್ ಮ್ಯಾನ್ ಚಿನ್ನಯ್ಯನನ್ನು ಶಿವಮೊಗ್ಗ ಜೈಲಿಗೆ ಶಿಫ್ಟ್ ಮಾಡಲಾಗಿದೆ. ತಡರಾತ್ರಿ 1:20 ಕ್ಕೆ ಶಿವಮೊಗ್ಗ ಜೈಲಿಗೆ ಚಿನ್ನಯ್ಯನನ್ನು ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರು ಕರೆತಂದಿದ್ದಾರೆ. ಭದ್ರತೆ ದೃಷ್ಟಿಯಿಂದ ಶಿವಮೊಗ್ಗದ ಕೇಂದ್ರ ಕಾರಾಗೃಹಕ್ಕೆ ಚಿನ್ನಯ್ಯನನ್ನ ರವಾನೆ ಮಾಡಲಾಗಿದ್ದು, ಇಂದಿನಿಂದ ಶಿವಮೊಗ್ಗದ ಕೇಂದ್ರ ಕಾರಾಗೃಹದ ಕಾವೇರಿ ಬ್ಯಾರಿಕ್ ನಲ್ಲಿ ಚಿನ್ನಯ್ಯನನ್ನ ಇರಿಸಲಾಗಿದೆ ಬಳಿಕ ಚಿನ್ನಯ್ಯನನ್ನು ಜೈಲು ಅಧಿಕಾರಿಗಳು ರವಾನೆ ಮಾಡಲಿದ್ದಾರೆ.