ಚಿತ್ರದುರ್ಗದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸ್ವಾತಂತ್ರ್ಯೋತ್ಸವದ ಅಂಗವಾಗಿ ನ್ಯಾಷನಲ್ ಪುಟ್ ಬಾಲ್ ಫೆಡರೇಷನ್, ಸಿ.ಎಫ್.ಸಿವತಿಯಿಂದ ನಡೆದ 1 ರಿಂದ 10ನೇ ತರಗತಿಯೊಳಗಿನ ಮಕ್ಕಳ ಪುಟ್ ಬಾಲ್ ಪಂದ್ಯಾವಳಿಯಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಚಿತ್ರದುರ್ಗ ಪುಟ್‍ಬಾಲ್ ಕ್ಲಬ್‍ನ ಉಪಾಧ್ಯಕ್ಷರಾದ ಎನ.ಡಿ.ಕುಮಾರ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ್ದು ಇಂದಿನ ದಿನದಲ್ಲಿ ಕ್ರೀಡೆಯ ಗುಣಮಟ್ಟ ಕುಸಿಯುತ್ತಿದೆ, ಇದರ ಬಗ್ಗೆ ಸರ್ಕಾರಗಳು ಗಮನ ನೀಡಬೇಕಿದೆ ಎಂದು ತಿಳಿಸಿದರು