ಚಾಮರಾಜನಗರದ ಸೋಮವಾರಪೇಟೆಯ ಬೈಪಾಸ್ ರಸ್ತೆಯಲ್ಲಿ ಮೊನ್ನೆ ಲಾರಿ, ಕಾರಿ ಹಾಗೂ ಸ್ಕೂಟರ್ ನಡುವೆ ಸರಣಿ ಅಪಘಾತವಾಗಿ ಮೂವರು ಬಾಲಕರು ಸಾವನ್ನಪ್ಪಿದರೇ ಓರ್ವ ಬಾಲಕ ಸೇರಿ ಮೂವರು ಗಂಭೀರವಾಗಿ ಗಾಯಗೊಂಡಿದ್ದ ಹಿನ್ನೆಲೆ ಎಸ್ಡಿಪಿಐ ಕಾರ್ಯಕರ್ತರು ಹಾಗೂ ಗಾಳಿಪುರ ಬಡಾವಣೆಯ ನಿವಾಸಿಗಳು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಬೈಪಾಸ್ ರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಓಡಾಡುತ್ತಿದ್ದು ಅಂಡರ್ ಪಾಸ್ ನಿರ್ಮಾಣ ಹಾಗೂ ಡಿವೈಡರ್ ಹಾಕಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.