ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸುತ್ತಿದ್ದ ಮಹಾನಗರ ಪಾಲಿಕೆಯ ತ್ಯಾಜ್ಯ ವಿಲೇವಾರಿ ಘಟಕದ ಶೆಡ್ ಏಕಾಏಕಿ ಕುಸಿದುಬಿದ್ದ ಘಟನೆ ಹಾಸನದ ಅಗಿಲೆ ಗ್ರಾಮದ ಬಳಿ ನಡೆದಿದ್ದು , ಕಾರ್ಮಿಕರು ಕೆಲಸ ಮಾಡುವ ವೇಳೆಯೇ ಬೃಹತ್ ಶೆಡ್ ದಿಢೀರ್ ಕುಸಿದುಬಿದ್ದಿದೆ. ಅದೃಷ್ಟವಶಾತ್ ಕಾರ್ಮಿಕರು ಅಪಾಯದಿಂದ ಪಾರಾಗಿದ್ದಾರೆ. ಶೆಡ್ ಕುಸಿತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.ಮರು ಬಳಕೆಯ ಕಸ ವಿಂಗಡಣೆಗಾಗಿ ಅಂದಾಜು ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ಶೆಡ್ ನಿರ್ಮಾಣ ಮಾಡಲಾಗುತ್ತಿತ್ತು. ಇದಕ್ಕಾಗಿ ಸಿಮೆಂಟ್ ಪಿಲ್ಲರ್ ಮೇಲೆ ಬೃಹತ್ ಕಬ್ಬಿಣದ ಕಂಬ ಅಳವಡಿಸಲಾಗಿತ್ತು. ಇದ್ದಕ್ಕಿದ್ದಂತೆ ಕಂಬ ಬಿದ್ದು, ಶೆಡ್ ನೆಲಕ್ಕುರುಳಿದೆ. ಗುತ್ತಿಗೆದಾರ ಕುಮಾರ್ ರವರ ಕಳಪೆ ಕಾಮಗಾರಿ , ಎಇಇ ಚನ್ನೇಗೌಡರ ಉಸ್ತುವಾರಿಯಲ್ಲಿ ನ