ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಮನಸ್ಸು ಗೊಂದಲದ ಗೂಡಾಗಿದೆ ಎಂದು ಶಿವಮೊಗ್ಗದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ. ಗುರುವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂದೂಗಳ ವಿಚಾರದಲ್ಲಿ ಮೂಗು ತೂರಿಸುವ ಕೆಲಸ ಮಾಡ್ತಿದೆ.ಇತರೆ ಧರ್ಮಿಯರನ್ನ ತಡೆಯಲು ಹಿಂದುಗಳನ್ನ ನೋವುಂಟು ಮಾಡುವ ಕೆಲಸ ಮಾಡ್ತಿದೆ.ಉಪ ಮುಖ್ಯಮಂತ್ರಿಗಳ ಹೇಳಿಕೆ ನೋಡಿದರೆ ನಮಗೆ ಅಯ್ಯೋ ಎನಿಸುತ್ತಿದೆ.ವಿಧಾನಸಭೆಯಲ್ಲಿ ಆರ್ ಎಸ್ ಎಸ್ ಪ್ರಾರ್ಥನೆಯನ್ನು ಡಿ.ಕೆ.ಶಿವಕುಮಾರ್ ಮಾಡ್ತಾರೆ.ಆಮೇಲೆ ತಪ್ಪಾಯ್ತು ಅಂತ ಕ್ಷಮೆ ಕೋರುತ್ತಾರೆ. ಧರ್ಮಸ್ಥಳ ವಿಚಾರದಲ್ಲೂ ಹಾಗೆ ನಡೆದುಕೊಂಡಿದ್ದಾರೆ ಎಂದು ಆರೋಪಿಸಿದರು.