Download Now Banner

This browser does not support the video element.

ಯಳಂದೂರು: ಪಟ್ಟಣದ ಬಸ್ ನಿಲ್ದಾಣದಲ್ಲಿ ಅಪರಿಚಿತ ಶವ ಪತ್ತೆ; ಕೈ ಮೇಲಿದೆ ಲಕ್ಷ್ಮಿ, ಲಿಂಗಮಣಿ ಹಚ್ಚೆ

Yelandur, Chamarajnagar | Sep 8, 2025
ಬಸ್ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿರುವ ಘಟನೆ ಯಳಂದೂರು ಬಸ್ ನಿಲ್ದಾಣದಲ್ಲಿ ಸೋಮವಾರ ನಡೆದಿದೆ. ಮೃತ ವ್ಯಕ್ತಿಗೆ 45-50 ವರ್ಷ ಇರಬಹುದು ಎಂದು ಅಂದಾಜು ಮಾಡಲಾಗಿದೆ.‌ ಕಳೆದ ಕೆಲವು ತಿಂಗಳಿನಿಂದ ಈತ ಯಳಂದೂರಿಗೆ ಬಂದು ಭಿಕ್ಷಾಟನೆ ಮಾಡುತ್ತಿದ್ದು ಬಳಿಕ ಅನಾರೋಗ್ಯಕ್ಕೀಡಾಗಿ ಮೃತಪಟ್ಟಿರುವುದು ಮೇಲ್ನೋಟಕ್ಕೆ ದೃಢವಾಗಿದೆ. ಮೃತ ವ್ಯಕ್ತಿಯ ಎರಡು ಕೈಗಳಲ್ಲಿ ಹಚ್ಚೆ ಹಾಕಿಸಿಕೊಂಡಿದ್ದು ಲಿಂಗಮಣಿ ಹಾಗೂ ಲಕ್ಷ್ಮೀ ಎಂದು ಬರೆದಿದೆ‌ . ಮೃತನ ಗುರುತು ಪತ್ತೆಗೆ ಸಹಕರಿಸಬೇಕೆಂದು ಯಳಂದೂರು ಪೊಲೀಸರು ಕೋರಿದ್ದು ಮಾಹಿತಿ ಇದ್ದವರು ಪೊಲೀಸರನ್ನು ಸಂಪರ್ಕಿಸಬಹುದಾಗಿದೆ.
Read More News
T & CPrivacy PolicyContact Us