ಅಕ್ಷರ ಕಲಿಯಬೇಕಾದರೆ ನಿತ್ಯ ಮೂರು ಕಿಲೋಮೀಟರ್ ದೂರ ನಡೆಯಲೇಬೇಕಾದ ದುಸ್ಥಿತಿ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಪೆಸಲಬಂಡ ಕ್ಯಾಂಪಿನ ವಿದ್ಯಾರ್ಥಿಗಳಿಗೆ ಬಂದೊದಗಿದೆ. ಹೌದು ಮಾನ್ವಿ ತಾಲೂಕಿನ ಸಂಗಾಪುರದಲ್ಲಿರುವ ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ನಿತ್ಯ ಪೆಸಲಬಂಡಕ್ಯಾಂಪಿನಿಂದ ಹತ್ತಾರು ವಿದ್ಯಾರ್ಥಿಗಳು ಸಂಗಾಪುರಕ್ಕೆ ಬಸ್ಸಿಗೆ ಹೋಗುತ್ತಾರೆ. ಆದರೆ ಸರಕಾರಿ ಶಾಲೆಯಿಂದ ವಾಪಸ್ಸು ಮನೆಗೆ ಬರುವಾಗ ನಿತ್ಯ ಮೂರು ಕಿ.ಮೀ ದೂರ ನಡೆದು ಮನೆ ಸೇರಬೇಕಿದೆ. ಸೆ12 ರ ಶುಕ್ರವಾರ ಸಂಜೆ ನಾಲ್ಕು ಗಂಟೆಗೆ ವಿದ್ಯಾರ್ಥಿಗಳು ಮಳೆಯಲ್ಲೇ ಮೂರು ಕಿ.ಮೀ ದೂರ ನಡೆದು ಮನೆ ಸೇರಿದರು. ಮಾನ್ವಿ ಪಟ್ಟಣದಿಂದ ಹತ್ತು ಕಿ.ಮೀ ಅಂತರದಲ್ಲಿ ಈ ಶಾಲೆ ಇದ್ದು, ಹೆಚ್ಚುವರಿ ಸಾರಿಗೆ ಬಸ್ ಬಿಡಲು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.