ಹೋರಾಟಗಾರ ಚನ್ನಪ್ಪ ಆನೆಗುಂದಿ ಅವರ ಮೇಲೆ ಶಹಪುರ ತಾಲೂಕಿನ ಹೊಸಕೇರಿ ಗ್ರಾಮದ ವ್ಯಕ್ತಿ ಸುಳ್ಳು ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದು ಇದನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಯಾದಗಿರಿ ನಗರದ ಡಿಸಿಇಆರ್ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಶನಿವಾರ ಮಧ್ಯಾಹ್ನದವರೆಗೆ ಸಾಮೂಹಿಕ ಸಂಘಟನೆಗಳ ವೇದಿಕೆ ಮುಖಂಡರು ಪ್ರತಿಭಟನೆ ನಡೆಸಿ ಆಗ್ರಹಿಸಿದರು. ಮನವಿ ಸ್ವೀಕರಿಸಿದ ಠಾಣೆಯ ಪಿ ಐ ಅವರು, ಪರಿಶೀಲನೆ ಮಾಡಿ ಸುಳ್ಳಾಗಿದ್ದಲ್ಲಿ ಎರಡು ಪ್ರಕರಣಗಳನ್ನು ರದ್ದುಗೊಳಿಸಲಾಗುವುದು ಎಂದು ತಿಳಿಸಿದರು.ಇದಕ್ಕೂ ಮುನ್ನ ಪೊಲೀಸ್ ಠಾಣೆಯ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.ವಿವಿಧ ಸಂಘಟನೆಗಳ ನೂರಾರು ಜನ ಭಾಗವಹಿಸಿದ್ದರು.