ಗುಂಡಲಗೇರಾ ಗ್ರಾಮದಲ್ಲಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಗ್ರಾಮ ಘಟಕ ಸಮ್ಮೇಳನ ಕಾರ್ಯಕ್ರಮ ಕೃಷಿ ಕೂಲಿಕಾರರಿಗೆ ಮೊದಲು ಕೃಷಿಯಲ್ಲಿ ಕೆಲಸ ಸಿಗುತ್ತಿತ್ತು ಈಗ ಜಾಗತೀಕರಣದಿಂದ ಬಿತ್ತನೆ ಕೆಲಸ ರಾಶಿ ಮಾಡುವ ಕೆಲಸ ಯಂತ್ರಗಳಿಂದಲೇ ಮಾಡಿಸುತ್ತಿರುವುದರಿಂದ ಕೃಷಿಯಲ್ಲಿ ಕೆಲಸ ಸಿಗದಂತಾಗಿ ಕೂಲಿಕಾರರು ವಲಸೆ ಹೆಚ್ಚಾಗಿದೆ ವಲಸೆಯನ್ನು ತಡೆಯಲು ಕೃಷಿ ಕೂಲಿಕಾರರಿಗೆ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ 200 ನೂರು ದಿನಗಳ ಕೆಲಸ ಹಾಗೂ ದಿನಕ್ಕೆ 600 ರೂಪಾಯಿ ಕೂಲಿ ಕೊಡಬೇಕೆಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ದಾವಲ್ ಸಾಬ್ ನದಾಫ್ ಆಗ್ರಹಿಸಿದ್ದಾರೆ. ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಪ್ರಥಮ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು ಉದ್ಯೋ