Download Now Banner

This browser does not support the video element.

ಮಳವಳ್ಳಿ: ತಾಲ್ಲೂಕಿನ ಅವ್ವೇರಹಳ್ಳಿ ಬಳಿ ಯುವಕನೊಬ್ಬನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾ ಗಿರುವ ದುಷ್ಕರ್ಮಿಗಳು

Malavalli, Mandya | Sep 12, 2025
ಮಳವಳ್ಳಿ : ಚಾಕುವಿನಿಂದ ಇರಿದು ಯುವಕನೊಬ್ಬನನ್ನು ಕೊಲೆ ಮಾಡಿ ರುವ ದುಷ್ಕೃತ್ಯವೊಂದು ಮಳವಳ್ಳಿ ತಾಲ್ಲೂಕಿನ ಅವ್ವೇರಹಳ್ಳಿ - ದೊಡ್ಡಬೂಹಳ್ಳಿ ನಡುವಿನ ಕಾಲುವೆ ರಸ್ತೆಯಲ್ಲಿ ಜರುಗಿದೆ. ತಾಲ್ಲೂಕಿನ ರಾಗಿಬೊಮ್ಮನಹಳ್ಳಿ ಗ್ರಾಮದ ವಾಸಿ ಮಹಾದೇವ ಸ್ವಾಮಿ ಎಂಬುವರ ಮಗನಾದ 24 ವರ್ಷದ ಮೋಹನ್ ಕುಮಾರ್ ಎಂಬಾತನೇ ಕೊಲೆಯಾಗಿರುವ ಯುವಕನಾಗಿದ್ದಾನೆ. ಗುರುವಾರ ರಾತ್ರಿ 10.30 ರ ಸಮಯದಲ್ಲಿ ಈತ ಅವ್ವೇರಹಳ್ಳಿ ದೊಡ್ಡಬೂಹಳ್ಳಿ ನಡುವಿನ ಕಾಲುವೆ ರಸ್ತೆಯ ಬಳಿ ಸತ್ತು ಬಿದ್ದಿದ್ದು ಯಾರೋ ದುಷ್ಕರ್ಮಿ ಗಳು ಮುಖದ ಮೇಲೆಲ್ಲಾ ಹಲ್ಲೆ ನಡೆಸಿ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
Read More News
T & CPrivacy PolicyContact Us