ಚಾಮುಂಡೇಶ್ವರಿ ತಾಯಿ ನಾಡ ದೇವತೆ, ಹಿಂದೂ ಧರ್ಮದವರು ಮಾತ್ರ ಪೂಜಿಸಬೇಕು ಎಂದು ರಾಜ ವಂಶಸ್ಥರಾಗಲಿ ಸರ್ಕಾರವಾಗಲಿ ಹೇಳಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಿಳಿಸಿದ್ದಾರೆ.ಸದಾಶಿವನಗರದ ತಮ್ಮ ನಿವಾಸದ ಬಳಿ ಆಗಸ್ಟ್ 27ರಂದು ಬೆಳಿಗ್ಗೆ 11 ಗಂಟೆಗೆ ಮಾತನಾಡಿದ ಅವರು, "ರಾಜವಂಶಸ್ಥರು ಹಾಗೂ ಸರ್ಕಾರ ಚಾಮುಂಡೇಶ್ವರಿ ತಾಯಿಯನ್ನ ನಾಡದೇವತೆ ಎಂದು ಒಪ್ಪಿ ಪೂಜಿಸುತ್ತಿದ್ದೇವೆ. ಚಾಮುಂಡೇಶ್ವರಿ ಎಲ್ಲಾ ಧರ್ಮದವರಿಗೂ ಆಶೀರ್ವಾದ ಮಾಡಲು ಇರುವ ನಾಡ ದೇವತೆ. ಹಿಂದೂಗಳು ಮಾತ್ರ ಬರಬೇಕು, ಬೇರೆಯವರು ಬರಬಾರದು ಎನ್ನುವುದಿಲ್ಲ ಎಂದು ಅವರು ತಿಳಿಸಿದರು.