ಕಲಬುರಗಿ : 2015 ರ ಅಕ್ಟೋಬರ್ 5 ರಂದು ಕಲಬುರಗಿ ನಗರದ ಹಾಗರಾಗ-ಮಾಲಗತ್ತಿ ಕ್ರಾಸ್ ರಸ್ತೆಯಲ್ಲಿ ಮೊಹಮ್ಮದ್ ಅಜರೋದ್ದಿನ್ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಬ್ಬರು ಕೊಲೆ ಆರೋಪಿಗಳಿಗೆ ನಗರದ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯವು ಜೀವವಾಧಿ ಶಿಕ್ಷೆ ನೀಡಿ ತೀರ್ಪು ಪ್ರಕಟಿಸಿದ್ದು, ಸೆ5 ರಂದು ಬೆಳಗ್ಗೆ 11.30 ಕ್ಕೆ ಮಾಹಿತಿ ಲಭ್ಯವಾಗಿದೆ.. ಕಟ್ಟಡ ನಿರ್ಮಾಣ ಕೆಲಸದಲ್ಲಿ ಮೊಹಮ್ಮದ್ ಅಜರೋದ್ದಿನ ವರ್ಚಸ್ಸು ಗಳಿಗೆ ಹೆಚ್ಚಾಗ್ತಿರೋದನ್ನ ಸಹಿಸದೇ ಖಾಜಾ ಮೈನೋದ್ದಿನ್ ಬಾಬಾ ಮತ್ತು ಇಸಾಕ್ ಸೇರಿಕೊಂಡು ಮಹ್ಮದ್ ಅಜರೋದ್ದಿನ ಸುತ್ತಿಗೆಯಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದರು.. ಈ ಬಗ್ಗೆ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.