ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್ ಅವರಿಗೆ ಅರಿಶಿಣ,ಕುಂಕುಮ ನೀಡಿ ಆಹ್ವಾನಿಸುವುದು ತಪ್ಪು ಎಂದು ಸಿಎಂ ಸಿದ್ಧರಾಮಯ್ಯ ಹೇಳಿಕೆಗೆ ಶಿವಮೊಗ್ಗ ನಗರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಗುರುವಾರ ಪ್ರತಿಕ್ರಿಯೆ ನೀಡಿದ್ದಾರೆ.ಮತ್ತೊಬ್ಬ ಹಿಂದೂ ಸಾಹಿತಿ ಬೂಕರ್ ಪ್ರಶಸ್ತಿ ಪಡೆದಿದ್ದರು, ಹಿಂದೂ ಸಾಹಿತಿ ಮಹಿಳೆ ದೀಪಾ ಬಸ್ತಿಯನ್ನು ಕರೆಯಬೇಕು ಅಂತ ಸಿದ್ಧರಾಮಯ್ಯರಿಗೆ ಯಾಕೇ ಅನಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.