Download Now Banner

This browser does not support the video element.

ಹನೂರು: ಬಾಳೆಗಿಡಗಳ ಬದುಕು ಜಮೀನಲ್ಲಿಯೇ ಕೊನೆ: ಬೆಲೆ ಇಲ್ಲದೆ ನಷ್ಟದಲ್ಲಿ ಎಲ್ಲೆಮಾಳದ ರೈತ ಕಂಗಾಲು

Hanur, Chamarajnagar | Sep 10, 2025
--- ಹನೂರು,:ತಾಲೂಕಿನ ಎಲ್ಲೆಮಾಳ ಗ್ರಾಮದ ರೈತನೋರ್ವ ತಮ್ಮ ಜಮೀನಿನಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಬಾಳೆಗಿಡಗಳನ್ನು ಬೆಳೆದಿದ್ದು, ಇವು ಈಗ ಕಟಾವು ಹಂತ ತಲುಪಿವೆ. ಆದರೆ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದ ಕಾರಣದಿಂದಾಗಿ ಈ ಎಲ್ಲಾ ಬೆಳೆಗಳು ಜಮೀನಿನಲ್ಲಿಯೇ ಹಣ್ಣಾಗಿ ಉದುರಿ ಕೊಳೆಯುತ್ತಿದೆ. ಇದರ ಪರಿಣಾಮವಾಗಿ ರೈತ‌ಕುಮಾರಸ್ವಾಮಿ ಆರ್ಥಿಕವಾಗಿ ಸಂಪೂರ್ಣ ನಷ್ಟದಲ್ಲಿದ್ದು, ಆತಂಕದಲ್ಲಿದ್ದಾರೆ. ಈ ವೇಳೆ ರೈತ ಕುಮಾರಸ್ವಾಮಿ ಮಾತನಾಡಿ ನಾನು ಮಳೆಯಿಲ್ಲದ ಸಂಕಷ್ಟದಲ್ಲೂಬಾಳೆ ಬೆಳೆಗೆ ನೀರು ಹಾಕಿ ಜೀವ ಕೊಟ್ಟಿದ್ದೇನೆ. ಆದರೆ ಈಗ ಈ ಹಣ್ಣುಗಳಿಗೆ ಬೆಲೆ ಇಲ್ಲ. ಯಾರೂ ಖರೀದಿಗೆ ಮುಂದೆ ಬರುತ್ತಿಲ್ಲ. ಸಂಪೂರ್ಣ ನಷ್ಟ ಅನುಭವಿಸುತ್ತಿದ್ದೇನೆಎಂದು ದುಃಖದಿಂದ ರೈತ ತಮ್ಮ ಸಮಸ್ಯೆ ಹಂಚಿಕೊಂಡರು.
Read More News
T & CPrivacy PolicyContact Us