ಮಲೆನಾಡು ಶಿವಮೊಗ್ಗದಲ್ಲಿ ನೆಟ್ವರ್ಕ್ ಆಗಿ ಗಣತಿ ವಿರೋಧಿಸಿ ವಿಭಿನ್ನ ಹೋರಾಟ ಮಾಡಲಾಗಿದೆ.ರಾಜ್ಯ ಸರ್ಕಾರದ ಮಹತ್ವಕಾಂಕ್ಷೆಯ ಸಾಮಾಜಿಕ,ಆರ್ಥಿಕ ಸಮೀಕ್ಷೆಗೆ ವಿರೋಧ ವ್ಯಕ್ತವಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಬರೂರು, ಕಲ್ಲುಕೊಪ್ಪ, ತೆಪ್ಪಗೋಡು ಮತ್ತು ಮುಳುಕೇರಿ ಗ್ರಾಮಸ್ಥರಿಂದ ಗ್ರಾಮಗಳ ನೆಟ್ವರ್ಕ್ ಹೋರಾಟ ಸಮಿತಿ ವತಿಯಿಂದ ಈ ಪ್ರತಿಭಟನೆಯನ್ನು ನಡೆಸಲಾಗಿದೆ.ನೆಟ್ವರ್ಕ್ ಕೊಟ್ಟು ಗೆಳತಿಯನ್ನ ಮಾಡಿ ಇಲ್ಲವಾದರೆ ಬೇಡ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಜನಗಣತಿಗೆ ನಮ್ಮ ವಿರೋಧವಿಲ್ಲ ಆದರೆ ನೆಟ್ವರ್ಕ್ ಬೇಕು ಸಮೀಕ್ಷೆಗೆ ನಾವು ಸಹಕರಿಸಲ್ಲ ಎಂದು ಹೋರಾಟದ ಹಾದಿಯನ್ನ ಗ್ರಾಮಸ್ಥರು ಹಿಡಿದಿದ್ದಾರೆ. ಇಕ್ವಿಟಾದ ಮಾಹಿತಿ ಭಾನುವಾರ ಲಭ್ಯವಾಗಿದೆ.