ಜೈ ಕಿಸಾನ ಬಾಜಿ ಮರ್ಚಂಟ ಆದೇಶ ರದ್ದು ಮಾಡುವ ಅಧಿಕಾರ ಬುಡಾ ವ್ಯಾಪ್ತಿಗೆ ಬರುವುದಿಲ್ಲ ಎಂದು ನ್ಯಾಯವಾದಿ ಸಂಜಯ ಪಾಟೀಲ ಹೇಳಿದರು. ತರಕಾರಿ ಬೆಳೆಯುವ ರೈತರಿಗೆ ಸಾರಿಗೆ ಸೌಲಭ್ಯ, ವಹಿವಾಟು ನಡೆಸಲು ಅನುಕೂಲವಾಗುವ ನಿಟ್ಟಿನಲ್ಲಿ ಜೈ ಕಿಸಾನ ಬಾಜಿ ಮರ್ಚಂಟನವರು ತರಕಾರಿ ಮಾರುಕಟ್ಟೆ ನಿರ್ಮಾಣ ಮಾಡಿದ್ದಾರೆ. 2021 ರಿಂದ ಕಾರ್ಯಾರಂಭವಾಗಿದೆ ಎಂದರು ಗುರುವಾರ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಅವರು. ಜೈ ಕಿಸಾನ ಬಾಜಿ ಮರ್ಚಂಟನವರಿಗೆ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಂದ 7 ದಿನದೊಳಗೆ ಉತ್ತರ ನೀಡುವಂತೆ ನೋಟಿಸ ಬಂದಿದೆ ಎಂದರು