ಕಲಬುರಗಿ : ಪ್ರಕರಣವೊಂದರ ಇತ್ಯರ್ಥಕ್ಕಾಗಿ 10 ಲಕ್ಷ ರೂ ಮುಂಗಡ ಪಡೆದು ಇಂದು 30 ಲಕ್ಷ ರೂಪಾಯಿ ಪಡೆಯೋವಾಗ ಕಲಬುರಗಿ ನಗರ ಎಸಿಪಿ ಶರಣಬಸಪ್ಪ ಸುಬೇದಾರ್ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಆ29 ರಂದು ಸಂಜೆ 5 ಗಂಟೆಗೆ ನಡೆದಿದೆ.. ರೇವಣಸಿದ್ದಯ್ಯ ಸ್ವಾಮಿ ಎಂಬುವರ ಪ್ರಕರಣ ಇತ್ಯರ್ತಕ್ಕಾಗಿ ಕೆಲ ದಿನಗಳ ಹಿಂದೆ 10 ಲಕ್ಷ ರೂ ಅಡ್ವಾನ್ಸ್ ಪಡೆದಿದ್ದರು. ಇಂದು ಬಾಕಿ 30 ಲಕ್ಷ ರೂ ಪಡೆಯೋವಾಗ ಲೋಕಾಯುಕ್ತ ಎಸ್ಪಿ ಸಿದ್ದರಾಜು ನೇತೃತ್ವದಲ್ಲಿ ದಾಳಿ ನಡೆಸಿ ಎಸಿಪಿ ಶರಣಬಸಪ್ಪ ಸುಬೇದಾರ್, ರೈಟರ್ ಚಂದ್ರಕಾಂತ, ಕಾನ್ಸ್ಟೆಬಲ್ ರಾಘವೇಂದ್ರ ಹಾಗೂ ಇಬ್ಬರು ಖಾಸಗಿ ವ್ಯಕ್ತಿಗಳು ಸೇರಿದಂತೆ ಐದು ಜನರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗ್ತಿದೆ..