ಹಿಂದೂ ಮಹಾ ಗಣಪತಿಯ ಶೋಭಾಯಾತ್ರೆಯನ್ನ ಮೈಸೂರಿನ ಮಾಹಾರಾಜರಾದ ಯದುವೀರ್ ಚಾಮರಾಜ ಕೃಷ್ಣದತ್ತ ಒಡೆಯರ್ ಅವರು ಉದ್ಘಾಟನೆ ಮಾಡಲಿದ್ದಾಗಿ ಪ್ರಭಂಜನ್ ಅವರು ತಿಳಿಸಿದ್ದಾರೆ. ಶುಕ್ರವಾರ ಬೆಳಗ್ಗೆ 10 ಗಂಟೆಗೆ ಪತ್ರಿಕಾಗೋಷ್ಠಿ ನಡೆಸಿದ ಬಜರಂಗದಳದ ದಕ್ಷಿಣ ಪ್ರಾಂತ ಸಂಯೋಜಕರಾದ ಪ್ರಭಂಜನ್ ಅವರು ಮಾತನಾಡಿದ್ದು ಈ ಬಾರಿ ಬೃಹತ್ ಶೋಭಾಯಾತ್ರೆಗೆ ಮೈಸೂರಿನ ರಾಜಮನೆತನದ ಯದುವೀರ್ ಚಾಮರಾಜ ಕೃಷ್ಣದತ್ತ ಒಡೆಯರ್ ಶೋಭಾಯಾತ್ರೆಯನ್ನು ಉದ್ಘಾಟನೆ ಮಾಡುವುದು ಈ ಬಾರಿಯ ವಿಶೇಷ ಎಂದರು.