ನಾಗಮಂಗಲ ಪೊಲೀಸರು ಕಾರ್ಯಾಚರಣೆ ನಡೆಸಿ ಸರಗಳ್ಳನೊಬ್ಬನನ್ನು ಬಂಧಿಸಿ, ಬಂಧಿತನಿಂದ 7 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣ ವಶ ಹಾಗೂ ಕೃತ್ಯಕ್ಕೆ ಬಳಸಿದ ಬೈಕ್ ವಶಪಡಿಸಿಕೊಳ್ಳಲಾಗಿದೆ. ಶಿರಾ ತಾಲ್ಲೂಕಿನ ಭೊತೇಶ್ವರ ನಗರದ ತಿಪ್ಪೇಶ @ ಭರತ್ (33) ಬಂಧಿತ ಆರೋಪಿ. ಕಳೆದ ಆ.15ರಂದು ಬೆಳ್ಳೂರು ಕ್ರಾಸ್ ಬಳಿ ಡಿಯೋ ಬೈಕ್'ನಲ್ಲಿ ತೆರಳುತ್ತಿದ್ದ ಚೈತ್ರ ಎಂಬುವವರನ್ನು ಕೆಳಗೆ ಬೀಳಿಸಿ ಕತ್ತಿನಲ್ಲಿದ್ದ 30 ಗ್ರಾಂ ತೂಕದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದನು. ಪ್ರಕರಣ ಸಂಬಂಧ ವಿಚಾರಣೆಗೆ ನಾಗಮಂಗಲ ಉಪ ವಿಭಾಗದ ಪೊಲೀಸರ ತಂಡ ರಚಿಸಲಾಗಿತ್ತು. ತಂಡ ಆ.28ರಂದು ಚಂದ್ರಶೇಖರಪುರದ ಬಳಿ ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಮಾಹಿತಿ ನೀಡಿದ್ದಾರೆ.