ಬಯಲು ಸೀಮೆ ಜಿಲ್ಲೆಗಳಾದ ಚಿಕ್ಕಬಳ್ಳಾಪುರ ಬೆಂಗಳೂರು ಗ್ರಾಮಾಂತರ ತುಮಕೂರು ಮತ್ತಿತರ ಜಿಲ್ಲೆಗಳಿಗೆ ಶಾಶ್ವತ ನೀರಾವರಿಯನ್ನು ಒದಗಿಸಬೇಕು ಎಂದು ನಿರಂತರವಾಗಿ ಹೋರಾಟ ಮಾಡುವುದು ಸರ್ಕಾರಗಳ ಗಮನ ಸೆಳೆಯುವುದು ಮತ್ತಿತರ ಕಾರ್ಯಗಳನ್ನು ಮಾಡುತ್ತಿದ್ದ ಶಾಶ್ವತ ನೀರಾವರಿ ಹೋರಾಟಗಾರ ಹಾಗೂ ವಾಣಿಜ್ಯೋದ್ಯಮ ಕೃಷಿಕ,ಎಎಪಿ ಮುಖಂಡ ಡಾ.ಮಧುಸೀತಪ್ಪರವರು ನಿಧನರಾಗಿದ್ದಾರೆ. ಈ ಬಗ್ಗೆ ಇಂದು ಬೆಳಗ್ಗೆ ಹಲವಾರು ಹೋರಾಟಗಾರರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಮುಂದೆ ಜಮಾಯಿಸಿದ್ದಾರೆ.ತಮ್ಮ ಸಂತಾಪ ಸೂಚಿಸಿದರು.