ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್‌ಗೆ ಬೆಂಬಲ ಎಂದು ತೆಲುಗು ಹಾಗೂ ಕ್ರಿಶ್ಚಿಯನ್ ಒಕ್ಕೂಟ ಹೇಳಿದೆ. ಭದ್ರಾವತಿ ತಾಲ್ಲೂಕಿನ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ಕರೆದು ಮಾತನಾಡಿದ ತೆಲುಗು ಹಾಗೂ ಕ್ರಿಶ್ಚಿಯನ್ ಒಕ್ಕೂಟದ ಮುಖಂಡರು, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾದ ಗೀತಾ ಶಿವರಾಜಕುಮಾರ್‌ಗೆ ಧನ್ಯವಾದಗಳು, ಅವರನ್ನು ನಮ್ಮ ಸಮಾಜದ ವತಿಯಿಂದ ಸಂಪೂರ್ಣವಾಗಿ ಬೆಂಬಲಿಸುತ್ತೇವೆ ಎಂದರು.