ಅಕ್ರಮವಾಗಿ ಮರಳು ಸಾಗುಸುತ್ತಿದ್ದ ಆರೋಪಿತನನ್ನು ಶಿರಹಟ್ಟಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ತಂಗೋಡ ಗ್ರಾಮದ ಸಮೀಪ ರಸ್ತೆಯ ಮಾರ್ಗದಲ್ಲಿ ಚೌಡಾಳ ಗ್ರಾಮದ ಚನ್ನಪ್ಪ ಡೊಳ್ಳಿನ ಎಂಬಾತನನ್ನು ಟ್ರ್ಯಾಕ್ಟರ್ ಸಮೇತ ಬಂಧಿಸಲಾಗಿದೆ. ಸರಕಾರಿ ಹಳ್ಳದಿಂದ ಪರವಾನಗಿ ಇಲ್ಲದೆ ಮರಳು ಕಳ್ಳತನ ಹಾಗೂ ಸಾಗಾಟ ಮಾಡುತ್ತಿದ್ದ ಹಿನ್ನಲೆಯಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ.