ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮತ್ತು ಶ್ರೀ ಶಿವಯೋಗ ಮಂದಿರ ಸಂಸ್ಥಾಪಕರಾದ ಸಮಾಜಯೋಗಿ ಕಾರಣಿಕ ಯುಗಪುರುಷ ಪೂಜ್ಯಶ್ರೀ ಲಿಂ. ಹಾನಗಲ್ಲ ಕುಮಾರ ಮಹಾಶಿವಯೋಗಿಗಳ 158 ನೇ ಜಯಂತಿ ಮಹೋತ್ಸವ ಸಮಾರಂಭದ ಅಂಗವಾಗಿ ಸದ್ಬಾವನಾ ಪಾದಯಾತ್ರೆ ಕಾರ್ಯಕ್ರಮ ದಾಸನಾಳ ಗ್ರಾಮದಲ್ಲಿ ನಡೆಯಿತು. ಸೆಪ್ಟೆಂಬರ್.12 ರಂದು ಬೆಳಗ್ಗೆ 10-00 ಗಂಟೆಗೆ ಪರಮಪೂಜ್ಯ ಸ್ವಾಮಿಗಳಿಂದ ಸದ್ಭಾವನಾ ಪಾದಯಾತ್ರೆ ದಾಸನಾಳ ಗ್ರಾಮದಲ್ಲಿ ಚಾಲನೆ ಈ ಪಾದಯಾತ್ರೆಯಲ್ಲಿ ಐವತ್ತಕ್ಕೂ ಹೆಚ್ಚು ಗುರುಪೀಠದ ಸ್ವಾಮಿಗಳು ಮತ್ತು ಊರಿನ ಸಹಸ್ರಾರು ಜನರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.