ಬಾಣಂತಿ ಮಹಿಳೆ ಸಾವು ಪ್ರಕರಣ: ನಿರ್ಲಕ್ಷö್ಯ ವಹಿಸಿದ್ದ ವೈದ್ಯೆ ಅಮಾನತ್ತು ಬಸವಕಲ್ಯಾಣ: ಹೆರಿಗೆ ವೇಳೆ ಚಿಕಿತ್ಸೆ ನೀಡುವಲ್ಲಿ ನಿರ್ಲಕ್ಷö್ಯ ವಹಿಸುವ ಮೂಲಕ ಬಾಣಂತಿ ಮಹಿಳೆಸಾವಿಗೆ ಕಾರಣರಾದ ಇಲ್ಲಿಯ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಸ್ತಿçÃರೋಗ ತಜ್ಞೆ ಡಾ: ಇರ್ಷಾನಾ ತಾಜೋದ್ದಿನ್ ಅವರನ್ನು ಅಮಾನತ್ತುಗೊಳಿಸಿ ಆದೇಶ ಹೋರಡಿಸಲಾಗಿದೆ. ಕಳೆದ ಆಗಸ್ಟ್ 8ರಂದು ತನ್ನ 2ನೇ ಹೆರಿಗೆಗಾಗಿ ಆಸ್ಪತ್ರೆಗೆ ಬಂದ ನಗರದ ಸನೋಬರ್ ವಾಹೇದ್(25) ಎನ್ನುವ ಮಹಿಳೆಗೆ ಹೆರಿಗೆ ನಂತರ ತೀವ್ರ ರಕ್ತಸ್ರಾವವಾಗಿ ಮಹಿಳೆ ಮೃತಪಟ್ಟಿದ್ದು, ಘಟನೆ ನಂತರ ಇಲಾಖೆ ತನಿಖೆ ನಡೆಸಲಾಗಿದೆ. ಹೆರಿಗೆ ನಂತರ ತೀವ್ರ ರಕ್ತಸ್ರಾವ ವಾಗುತಿದ್ದರು ಸಹ ಅಗತ್ಯ ಚಿಕಿತ್ಸೆ ನೀಡದೆ ನಿರ್ಲಕ್ಷö್ಯ ವಹಿಸಿದ್ದೆ ಮಹಿಳೆ ಸಾವಿಗೆ ಕಾರಣವಾಗಿದೆ