ಸಂಭ್ರಮಾಚರಣೆ ವೀಕ್ಷಿಸುವ ಭರದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನ ಮೃತಪಟ್ಟ ಪ್ರಕರಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಖ್ಯಸ್ಥ ರಾಜೇಶ್ ಮೆನನ್ ಅವರು ಜಿಲ್ಲಾಧಿಕಾರಿಗಳೆದುರು ತಮ್ಮ ಹೇಳಿಕೆ ದಾಖಲಿಸಿದ್ದಾರೆ. ಜೂನ್ 13ರಂದು ಸಂಜೆ 5:30ರ ಸುಮಾರಿಗೆ ಕೆ.ಜಿ.ರಸ್ತೆಯಲ್ಲಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿಯವರ ಕಚೇರಿಗೆ ಆಗಮಿಸಿದ ರಾಜೇಶ್ ಮೆನನ್ ಅವರು, ತಂಡದ ಸಂಭ್ರಮಾಚರಣೆಯ ದಿನದ ವಿದ್ಯಮಾನಗಳ ಕುರಿತು ತಮ್ಮ ಹೇಳಿಕೆ ದಾಖಲಿಸಿದರು.ಬಳಿಕ ಹೊರಬಂದ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದೆ ತೆರಳಿದರು.