ಮೊಳಕಾಲ್ಮೂರು ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಕಾಫರ್ ಕಂಟ್ರೋಲ್ ಕೇಬಲ್ ಕಳವು ಪ್ರಕರಣ ಭೇಧಿಸುವಲ್ಲಿ ಸಕ್ಸಸ್ ಆಗಿದ್ದಾರೆ. ಮೂರು ಮಂದಿ ಕಳ್ಳರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.. ಬಂಧಿತರನ್ನ ಜಗದೀಶ್, ಸಣ್ಣ ಈರೇಶ್, ಮಂಜುನಾಥ್ ಎಂದು ಗುರುತಿಸಲಾಗಿದೆ.ಮೊಳಕಾಲ್ಮೂರಿನ ಎರಡು ಕಡೆ ಅಲ್ಯೂಮಿನಿಯಂ ಕೇಬಲ್ ಕಳವು ಮಾಡಿದ್ದ ಆರೋಪಿಗಳನ್ನ ಪೊಲೀಸರು ಹೆಡೆ ಮುರಿಕಟ್ಟಿದ್ದಾರೆ. ಬಂಧಿತರಿಂದ 2.10 ಲಕ್ಷ ಬೆಳೆ ಬಾಳುವ 300 ಮೀಟರ್ ಕಾಫರ್ ಕೇಬಲ್ ವಶಕ್ಕೆ ಪಡೆಯಲಾಗಿದೆ. ಮೊಳಕಾಲ್ಮೂರು ಪಿಐ ವಸಂತ್ ಅಸೋಡೆ, ಪಿಎಸ್ಐ ಮಹೇಶ್ ನೇತೃತ್ವದಲ್ಲಿ ಆರೋಪಿಗಳನ್ನ ಅರೆಸ್ಟ್ ಮಾಡಲಾಗಿದ್ದು, ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.