ಕನ್ನಡದಲ್ಲಿ ಮಾತನಾಡಲಾರೆ ಎಂದು ವ್ಯಕ್ತಿಯೊಬ್ಬ ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ ಬಳಿ ಕಿರಿಕ್ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸೆಪ್ಟೆಂಬರ್ 25ರಂದು ರಾತ್ರಿ 8 ಗಂಟೆ ಸುಮಾರಿಗೆ ಜೆ.ಬಿ.ನಗರ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆರೋಪಿ ಆದಿತ್ಯ ಅಗರ್ವಾಲ್ ವಿರುದ್ಧ ಇಂದಿರಾನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.100 ಫೀಟ್ ರಸ್ತೆಯಲ್ಲಿ ತಪಾಸಣೆ ಕರ್ತವ್ಯದಲ್ಲಿದ್ದ ಪಿಎಸ್ಐ ಕವಿತಾ, ಆರೋಪಿಯ ಕಾರನ್ನ ತಡೆದಿದ್ದರು.ಈ ವೇಳೆ ಡ್ರಿಂಕ್ ಆ್ಯಂಡ್ ಡ್ರೈವ್ ತಪಾಸಣೆ ಮಾಡಲು ಮುಂದಾದಾಗ ಸಹಕರಿಸದ ಆರೋಪಿ ಪಿಎಸ್ಐ ಬಳಿ ಕಿರಿಕ್ ತೆಗೆದಿದ್ದಾನೆ.ಕನ್ನಡ ಬರಲ್ಲ ಎನ್ನುತ್ತಾ ಹಿಂದಿ, ಇಂಗ್ಲೀಷ್‌ನಲ್ಲಿ ಮಾತನಾಡುವಂತೆ ಅರಚಾಡಿದ್ದಾನೆ.