ಯಾದಗಿರಿ ಜಿಲ್ಲೆಯ ವಡಿಗೇರ ತಾಲೂಕಿನ ಕೊಂಕಲ್ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಅಂಗನವಾಡಿ ಕೇಂದ್ರದ ಬೀಗ ಮುರಿದು ಯಾರೋ ಕಿಡಿಗೇಡಿಗಳು ಕಳ್ಳತನ ಮಾಡಿರುವ ಘಟನೆ ನಡೆದಿದೆ. ಶನಿವಾರ ಬೆಳಗ್ಗೆ ಅಡುಗೆ ಸಹಾಯಕ್ಕೆ ಬಂದು ನೋಡಿದಾಗ ಬೀಗ ಮುರಿದಿರುವುದು ಕಂಡುಬಂದಿದ್ದು,ಒಳಗೆ ಹೋಗಿ ನೋಡಿದಾಗ ಆಹಾರ ಧಾನ್ಯಗಳನ್ನು,ಊಟದ ತಟ್ಟೆಗಳನ್ನು,ತೂಕದ ಯಂತ್ರವನ್ನು ಕದ್ದುಕೊಂಡು ಹೋಗಿರುವುದಾಗಿ ಹೇಳಲಾಗಿದೆ. ವಡಿಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.