ಕಲಬುರಗಿ : ವಿದ್ಯುತ್ ಸರಬರಾಜು ವ್ಯತ್ಯಯ ಉಂಟಾದ ವಿಚಾರಕ್ಕೆ ಸಂಬಂಧಿಸಿದಂತೆ, ವ್ಯಕ್ತಿಯೊಬ್ಬರು ಜೆಸ್ಕಾಂ ಅಧಿಕಾರಿಗೆ ಅವ್ಯಾಚ್ಚ ಶಬ್ದಗಳಿಂದ ಬೈಯ್ದಿದ್ದಲ್ಲದೇ, ಜೀವ ಬೆದರಿಕೆ ಹಾಕಿರೋ ಘಟನೆ ಕಲಬುರಗಿ ನಗರದ ಆದರ್ಶ ಕಾಲೋನಿಯಲ್ಲಿ ನಡೆದಿದ್ದು, ಸೆ14 ರಂದು ಬೆಳಗ್ಗೆ 7 ಗಂಟೆಗೆ ಮಾಹಿತಿ ಲಭ್ಯವಾಗಿದೆ. ಕುನಾಲ್ ಎಂಬ ವ್ಯಕ್ತಿ ಜೆಸ್ಕಾಂ ಸಹಾಯಕ ನಿರ್ವಾಹಕ ಅಧಿಕಾರಿ ಅಜಿಂ ಪಾಶಾ ಎಂಬುವರಿಗೆ ಕರೆ ಮಾಡಿ ವಿದ್ಯುತ್ ಸರಬರಾಜು ವ್ಯತ್ಯಯ ಬಗ್ಗೆ ಕೇಳಿದ್ದಾರೆ. ಈ ವೇಳೆ ಕುನಾಲ್ ಎಂಬಾತ ಅಜೀಂಗೆ ನಿನ್ನ ಜೀವ ಸಹಿತ ಬಿಡಲ್ಲ. ಹೊಡೆದು ಹಾಕ್ತೆನೆಂದು ಬೆದರಿಕೆ ಹಾಕಿದ್ದು, ಈ ಬಗ್ಗೆ ಎಂಬಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.