ಡಿಸಿಎಂ ಡಿ.ಕೆ.ಶಿವಕುಮಾರ ಅವರು ವಕೀಲರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದನ್ನ ಖಂಡಿಸಿ ಬಾಗಲಕೋಟೆಯಲ್ಲಿಂದು ನ್ಯಾಯವಾದಿಗಳ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಬಾಗಲಕೋಟೆ ನಗರದ ನ್ಯಾಯಾಲಯದ ಆವರಣದಿಂದ ಜಿಲ್ಲಾಡಳಿತಭವನದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ವಕೀಲರು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಘೋಷಣೆ ಕೂಗಿ ಅಕ್ರೋಶ ವ್ಯಕ್ತಪಡಿಸಿದರು. ಕಳೆದ ಸೆಪ್ಟೆಂಬರ್ 6.ರಂದು ಬಾಗೀನ ಅರ್ಪಿಸಲು ಆಲಮಟ್ಟಿಗೆ ಬಂದಾಗ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕೃಷ್ಣ ಮೇಲ್ದಂಡೆ ಯೊಜನೆಯ ಸಂತ್ರಸ್ತ ರೈತರಿಗೆ ಪರಿಹಾರದ ವಿಚಾರದಲ್ಲಿ ವಕೀಲರು ದಾರಿ ತಪ್ಪಿಸುತ್ತಿದ್ದಾರೆಂಬ ಹೇಳಿಕೆ ನೀಡಿದ್ದರು.