ಯಾದಗಿರಿ ನಗರದಲ್ಲಿ ಯಾದಗಿರಿ ಜಿಲ್ಲಾ ಕೋಳಿ ಕಬ್ಬಲಿಗ ತಳವಾರ ಸಮಾಜದಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. ಸೋಮವಾರ ಬೆಳಗ್ಗೆ ನಗರದ ಸರ್ಕಾರಿ ಪದವಿ ಕಾಲೇಜಿನಿಂದ ಸುಭಾಷ್ ವೃತ್ತದ ವರೆಗೆ ಪ್ರತಿಭಟನ ಮೆರವಣಿಗೆ ನಡೆಯಿತು. ನಂತರ ಸುಭಾಸ್ ವೃತ್ತದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಮಾವನೆಗೊಂಡ ಜನರು, ಸರ್ಕಾರ ಕೂಲಿ ಕಬ್ಬಲಿಗ ಸಮಾಜದ ಹಿನ್ನುಳಿದ ಪರ್ಯಾಯ ಪದಗಳನ್ನು ಎಸ್ ಟಿ ಪಟ್ಟಿಗೆ ಸೇರ್ಪಡೆಗೊಳಿಸಬೇಕು ಹಾಗೂ ನಿಜಶರಣ ಅಂಬಿಗರ ಚೌಡಯ್ಯನವರ ಕುರಿತು ಯಾರಾದರೂ ಅವಹೇಳನಕಾರಿಯಾಗಿ ಮಾತನಾಡಿ ಅಪಮಾನ ಮಾಡಿದರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಸೇರಿದಂತೆ ಅನೇಕ ಮುಖಂಡರು,ಸಾವಿರಾರು ಜನ ಭಾಗವಹಿಸಿದ್ದರು