ಮಲೆನಾಡು ಶಿವಮೊಗ್ಗದಲ್ಲಿ ಗೌರಿ ಗಣೇಶ ಹಬ್ಬದ ಖರೀದಿ ಜೋರಾಗಿದೆ ಹಬ್ಬದ ಹಿನ್ನೆಲೆ ಶಿವಮೊಗ್ಗ ನಗರದ ಗಾಂಧಿ ಬಜಾರ್ ನಲ್ಲಿ ಜನವೋ ಜನ ಕಳೆದ ಬಾರಿಗಿಂತಲೂ ಹೂವು ಹಣ್ಣಿನ ದರದಲ್ಲಿ ಏರಿಕೆಯಾಗಿದ್ದರು ಸಹ ಲೆಕ್ಕಿಸದ ಜನತೆ ಹಬ್ಬದ ಸಂಭ್ರಮದಲ್ಲಿ ತೊಡಗಿದ್ದಾರೆ ದಾಳಿಂಬೆ ಕೆಜಿಗೆ 160 ರೂಪಾಯಿ, ಸಪೋಟ, ಸೇಬು, ಬಾಳೆಹಣ್ಣು ಕೆಜಿಗೆ 120 ರೂಪಾಯಿ ಯಾಗಿದ್ದು, ಹೂವುಗಳಾದ ಸೇವಂತಿಗೆ,ಕಾಕಡ,ಮಲ್ಲಿಗೆ ಹೂವು ಮಾರಿಗೆ ನೂರು ರೂಪಾಯಿ, ದುಂಡು ಮಲ್ಲಿಗೆ,ಕನಕಾಂಬರ ಮಾರಿಗೆ 300 ರೂಪಯಿಗೆ ಮಾರಾಟವಾಗುತ್ತಿದೆ. ಈ ಕುರಿತಾದ ಮಾಹಿತಿ ಮಂಗಳವಾರ ಲಭ್ಯವಾಗಿದೆ.