ಮದ್ದೂರು : ಪಟ್ಟಣದ ನಲ್ಲಿ ಭಾನುವಾರ ಸಂಜೆ 6.30 ರ ಸಮಯದಲ್ಲಿಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ಮೇಲೆ ಕಲ್ಲು ತೋರಿದ ಪ್ರಕರಣಕ್ಕೆ ಸಂಬಂ ಧಿಸಿದಂತೆ ಮಸೀದಿ ಮುಲ್ಲಾ ಅವರನ್ನು ಬಂಧಿಸಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವುದರ ಜೊತೆಗೆ ಸದರಿ ಮಸೀದಿಯನ್ನು ಮುಚ್ಚಬೇಕು ಎಂದು ಮೈಸೂರಿನ ಮಾಜಿ ಸಂಸದ ಪ್ರತಾಪ್ ಸಿಂಹ ಆಗ್ರಹಿಸಿದ್ದಾರೆ. ಮದ್ದೂರು ಪಟ್ಟಣದ ತಾಲ್ಲೂಕು ಕಚೇರಿ ಬಳಿ ಘಟನೆ ಖಂಡಿಸಿ ಸೋಮವಾರ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಹಿಂದು ಕಾರ್ಯ ಕರ್ತರ ಬೃಹತ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಕಳೆದ ವರ್ಷ ನಾಗಮಂಗಲದಲ್ಲಿ ಗಲಭೆ ನಡೆಸಿದ್ದ ಕೋಮು ಶಕ್ತಿಗಳು ಈ ಬಾರಿ ಮದ್ದೂರಿನಲ್ಲಿ ಪೂರ್ವ ಯೋಜಿತವಾಗಿ ಗಲಬೆ ಸೃಷ್ಟಿಸಿ ದ್ದಾರೆ ಎಂದು ಆರೋಪಿಸಿದರು.