Download Now Banner

This browser does not support the video element.

ಕಂಪ್ಲಿ: ನಗರದಲ್ಲಿ ಆರ್ಸಿಬಿ ಅಭಿಮಾನಿಗಳ ಗಮನ ಸೆಳೆಯುತ್ತಿರುವ 'ವಿರಾಟ್ ಕೊಹ್ಲಿ ಗಣಪ'

Kampli, Ballari | Aug 28, 2025
ಕಂಪ್ಲಿಯ ಎಸ್.ಎನ್ ಪೇಟೆ ಬಾಯ್ಸ್ ವತಿಯಿಂದ ಪ್ರತಿಷ್ಠಾಪನೆ ಮಾಡಲಾದ ಗಣೇಶ ಮೂರ್ತಿ ಈ ಬಾರಿ ವಿಶೇಷ ಆಕರ್ಷಣೆಯಾಗಿದೆ. ಆಗಸ್ಟ್ 28, ಗುರುವಾರ ಮಧ್ಯಾಹ್ನ 12:30ಕ್ಕೆ "ಆರ್ಸಿಬಿ ವಿಜಯೋತ್ಸವ" ಎಂಬ ಶೀರ್ಷಿಕೆಯಡಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದ್ದು, ಜನಪ್ರಿಯ ಕ್ರಿಕೆಟಿಗ ವಿರಾಟ್ ಕೋಹ್ಲಿ ಅವರ ಅವತಾರದಲ್ಲಿ ಗಣೇಶ ಮೂರ್ತಿಯನ್ನು ರೂಪಿಸಿದ್ದು ಭಕ್ತರ ಗಮನ ಸೆಳೆದಿದೆ. ಕೋಹ್ಲಿ ಧರಿಸುವ ಆರ್ಸಿಬಿ ಜರ್ಸಿ, ಆಟದ ಭಂಗಿ ಮತ್ತು ವಿಜಯೋತ್ಸವದ ಝಲಕ್ ಮೂಡಿಸುವ ಈ ಗಣೇಶ ಮೂರ್ತಿ ಸ್ಥಳೀಯರು ಹಾಗೂ ಅಭಿಮಾನಿಗಳಿಗೆ ಕುತೂಹಲದ ಕೇಂದ್ರವಾಗಿದೆ.
Read More News
T & CPrivacy PolicyContact Us