2015ರ ಫೆಬ್ರವರಿ 7ರಂದು ಬಸವನ ಕುಡಚಿಯ ನಾಗದೇವ ಗಲ್ಲಿಯಲ್ಲಿ ನಗರ ಪಾಲಿಕೆಯ ಖಾಲಿ ನಿವೇಶನಕ್ಕೆ ಫಲಕ ಅಳವಡಿಸುವ ವೇಳೆ ನಡೆದ ಹಲ್ಲೆ ಪ್ರಕರಣದಲ್ಲಿ, ಐವರು ಆರೋಪಿಗಳಿಗೆ ನಗರದಲ್ಲಿ 2ನೇ ಜೆಎಂಎಫ್‌ಸಿ ನ್ಯಾಯಾಲಯವು 6ತಿಂಗಳ ಜೈಲು ಶಿಕ್ಷೆ & 65 ಸಾವಿರ ರೂ.ದಂಡ ವಿಧಿಸಿ ಸೋಮವಾರ 4 ಗಂಟೆಗೆ ನಗರದಲ್ಲಿ ತೀರ್ಪು ನೀಡಿದೆ ಬೆಳಗಾವಿ ತಾಲೂಕಿನ ಬಸವನ ಕುಡಚಿಯ ಕಿರಣ ಪಾಟೀಲ, ಅಮಿತ,ಶ್ರೀಕಾಂತ,ಮಹೇಂದ್ರ, ಸುನೀಲ ಶಿಕ್ಷೆಗೆ ಒಳಗಾದವರು ನಿವೇಶನದಲ್ಲಿ ಸಮಾಜದಿಂದ ಇಲ್ಲಿ ಬಸದಿ ನಿರ್ಮಿಸಲಿದ್ದೇವೆ ಎಂದು ಹೇಳಿ ಪಾಲಿಕೆಯ ಫಲಕ ಅಳವಡಿಸಲು ವಿರೋಧ ವ್ಯಕ್ತಪಡಿಸಿದ್ದ ಆರೋಪಿಗಳು, ಸುಜಾತಾ ಯಲ್ಲಮ್ಮನವರ ದಂಪತಿ ಮೇಲೆ ಹಲ್ಲೆ ನಡೆಸಿದ್ದ ಆರೋಪಿಗಳು.