ಚಳ್ಳಕೆರೆ:-ಪ್ರಾಣಿ ಸಂಕುಲದ ಅಳಿವು ಉಳಿವು ಪರಿಸರದಲ್ಲಿ ಅಡಗಿದೆ ಎಂದು ಶ್ರೀ ದೇನಾ ಭಗತ್ ಗುರೂಜಿ ಹೇಳಿದರು. ಗುರುವಾರ ಮಧ್ಯಾಹ್ನ 12:35ಕ್ಕೆ ಧೇನಾ ಭಗತ್ ಸೇವಾ ಟ್ರಸ್ಟ್ ರಾಜಯೋಗ ವಿದ್ಯಾಶ್ರಮ ಸಹಯೋಗದಲ್ಲಿ ರೇಖಲಗೆರೆ ಕಾವಲು ಪ್ರದೇಶದಲ್ಲಿ ಕೋಟಿ ವೃಕ್ಷ ಅಭಿಯಾನ ಕಾರ್ಯಕ್ರಮದಲ್ಲಿ ಸಸಿ ನೆಡುವಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪರಿಸರ ದಿನಾಚರಣೆ ಎಂಬುದು ಒಂದು ದಿನಕ್ಕೆ ಸೀಮಿತವಾಗಬಾರದು. ಆರೋಗ್ಯಕರ ಜೀವನಕ್ಕಾಗಿ ಪರಿಸರ ಪ್ರಮುಖ ಪಾತ್ರ ವಹಿಸುತ್ತದೆ ಈ ನಿಟ್ಟಿನಲ್ಲಿ ಸಮಾಜದ ನಾಗರಿಕರು ಹೆಚ್ಚು ಪರಿಸರ ಕಾಳಜಿ ವಹಿಸಿಕೊಳ್ಳಬೇಕು. ಗಿಡಗಳನ್ನು ನೆಟ್ಟು ಇತರರಿಗೂ ಗಿಡ ನೆಡುವಂತೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯನಿರ್ವಹಿಸಬೇಕು. ಪ್ರತಿಯೊಬ್ಬರು ಪರಿಸರ ಸಂರಕ್ಷಿಸಬೇಕು ಎಂದರು.