ದಾಂಡೇಲಿ : ಗಾಂಧಿನಗರದ ಕಂಜಾರಬಾಟ್'ನಲ್ಲಿ ಮಲಗಿದ್ದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾದ ಘಟನೆ ಮಂಗಳವಾರ ಬೆಳಿಗ್ಗೆ ಏಳು ಗಂಟೆ ಸುಮಾರಿಗೆ ನಡೆದಿದೆ. ಗಾಂಧಿನಗರದ ಕಂಜಾರಬಾಟ್'ನಲ್ಲಿರುವ ಶ್ರೀಕೃಷ್ಣ ದೇವಸ್ಥಾನದ ಹತ್ತಿರ ಮಲಗಿದ್ದ ಸ್ಥಿತಿಯಲ್ಲಿ ವ್ಯಕ್ತಿಯೋರ್ವನ ಶವ ಪತ್ತೆಯಾಗಿದ್ದು, ಸ್ಥಳೀಯರು ತಕ್ಷಣವೇ ನಗರ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಿದ್ದಾರೆ. ಮೃತ ವ್ಯಕ್ತಿ ಹಾಲಿ ಕೇರವಾಡ ನಿವಾಸಿಯಾಗಿದ್ದು, ಪಾರೂಕ್ ಅಬ್ಬಾಸ ಅಲಿ ಜಾಕಾತಿ (ವ.38) ಎಂಬವನೇ ಮೃತಪಟ್ಟ ವ್ಯಕ್ತಿಯಾಗಿದ್ದಾನೆ. ಈತ ವಿಪರೀತ ಸರಾಯಿ ಕುಡಿತದ ಚಟವನ್ನು ಹೊಂದಿದ್ದು, ಲೋ ಬಿಪಿಯಾದ ಹಿನ್ನಲೆಯಲ್ಲಿ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.