ಯಾವಾಗಲೂ ಸಂವಿಧಾನದ ಬಗ್ಗೆ ಮಾತನಾಡುವ ಕಾರ್ಮಿಕ ಸಚಿವ ಸಂತೋಷ ಲಾಡ್ ಕೋಲಾರ ಜಿಲ್ಲೆಯಲ್ಲಿ ಎಸ್ಸಿಎಸ್ಟಿ ಗುತ್ತಿಗೆದಾರರಿಗೆ ಆಗುತ್ತಿರುವ ಅನ್ಯಾಯವನ್ನು ಮೊದಲು ಸರಿಪಡಿಸಲಿ ಎಂದು ಸಚಿವ ಸಂತೋಷ ಲಾಡ್ ಗೆ ಕೋಲಾರ ಜಿಲ್ಲಾ ಬಿಜೆಪಿ ಆಧ್ಯಕ್ಷ ಓಂಶಕ್ತಿ ಚಲಪತಿ ಟಾಂಗ್ ನೀಡಿದರು.ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೋಲಾರ ಜಿಲ್ಲೆಗೆ ಸರ್ಕಾರ 60 ಕೋಟಿ ಟೆಂಡರ್ ಕರೆಯಲಾಗಿದೆ. ಶೇಕಡಾ 24 ಪರ್ಸೆಂಟ್ ದಲಿತ ಹಾಗೂ 19 ಪರ್ಸೆಂಟ್ ಹಿಂದುಳಿದ ವರ್ಗಗಳಿಗೆ ಗುತ್ತಿಗೆ ಕೊಡಬೇಕಾಗಿದೆ. ಕೋಲಾರದಲ್ಲಿ ಎಷ್ಟು ಜನ ದಲಿತ ಹಾಗೂ ಹಿಂದುಳಿದ ವರ್ಗಗಳ ಗುತ್ತಿಗೆದಾರರಿಗೆ ಕೊಟ್ಟಿದ್ದಾರೆ ಎಂಬುದನ್ನು ಮೊದಲು ಸಚಿವರು ತಿಳಿಸಬೇಕು,ಎಂದರು