ಮಳವಳ್ಳಿ : ಕೆ ಆರ್ ಎಸ್ ಅಣೆಕಟ್ಟೆಯ ತಳಭಾಗದ ಕಟ್ಟೇರಿ ಗ್ರಾಮದ ಬಳಿಯಿಂದ ಬೆಂಗಳೂರು ನಗರಕ್ಕೆ ನೀರು ಪೂರೈಕೆ ಮಾಡುವ 6ನೇ ಹಂತದ ಯೋಜನೆಯನ್ನು ರಾಜ್ಯ ಸರ್ಕಾರ ಕೈಗೆತ್ತಿಕೊಳ್ಳಲು ಮುಂದಾಗಿದ್ದು ಈ ಯೋಜನೆ ವಿ ಸಿ ನಾಲೆಯ ಕೊನೆ ಭಾಗವಾದ ಮಳವಳ್ಳಿ ಮದ್ದೂರು ಹಾಗೂ ಮಂಡ್ಯ ಭಾಗದ ರೈತರಿಗೆ ಮಾರಕವಾಗಲಿದೆ ಎಂದು ನೀರಾವರಿ ತಜ್ಞ ಅಜ್ಜನಹಳ್ಳಿ ಪ್ರಸನ್ನಕುಮಾರ್ ಎಚ್ಚರಿಸಿದ್ದಾರೆ. ತಾಲ್ಲೂಕಿನ ಸಂಪೂರ್ಣ ಸಾವಯವ ಕೃಷಿಕರ ಸಂಘ ಹಾಗೂ ಮಂಡ್ಯ ಜಿಲ್ಲಾ ಕಾವೇರಿ ಹಿತರಕ್ಷಣಾ ಸಮಿತಿ ಆಶ್ರಯದಲ್ಲಿ ಮಳವಳ್ಳಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಭಾನುವಾರ ಸಂಜೆ 6.30 ರ ಸಮಯದಲ್ಲಿ ಏರ್ಪಾಡಿಸ ಲಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜೀವನ ಕುರಿತ ಆಳಿದ ಮಾಸ್ವಾಮಿಗಳು ನಾಟಕ ಪ್ರದರ್ಶನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.